ಸ್ನೇಹವೆಂಬ ಪದ ಅದೆಷ್ಟು ಸುಂದರ
ಅಲ್ಲಿ ಇಲ್ಲ ಯಾವ ಆಳ ಕಂದರ
ಅಳಲು ಸಿಗುವ ಹೆಗಲು ಅದು,
ನಿದ್ದೆ ತರುವ ಮಡಿಲು ಅದು,
ಬಿಸಿಲ ತಡೆವ ಮುಗಿಲು ಅದು,
ಮನವ ತಣಿಸೊ ಕಡಲು ಅದು || ಸ್ನೇಹವೆಂಬ ||
ಬೆಂಕಿಮಳೆಗೆ ಅದುವೆ ಕೊಡೆ
ಭೇದಭಾವಕಿಲ್ಲ ಎಡೆ,
ಮೂರು ಕವಲು ಒಂದೆ ಜಡೆ,
ನೂರು ಹೆಜ್ಜೆ ಒಂದೆ ನಡೆ || ಸ್ನೇಹವೆಂಬ ||
ದೈವ ಕೊಟ್ಟ ವರವಿದು,
ಸ್ನೇಹವೆಂಬ ಮರವಿದು,
ಎಂದೂ ಬಾಡಿ ಮುರಿಯದು,
ಸಾವೆಂಬುದನರಿಯದು || ಸ್ನೇಹವೆಂಬ ||
(1998ರ ಆಗಸ್ಟ್ ನಲ್ಲಿ ಬರೆದಿದ್ದ ಪದ್ಯ)
No comments:
Post a Comment